About RAJ......

My photo
Sr. Software Engineer @ T8 International,Bangalore....

Friday, February 4, 2011

ಬದುಕು ...

ಮೂಡಣದಿ ನೇಸರನು ಮತ್ತೆ ಹುಟ್ಟಿ ಬಂದ
ಹೊಸ ಆಸೆ ಹೊಸ ಕನಸ ಹೆಗಲಲಿ ಹೊತ್ತು ತಂದ...
ಬದುಕಿ ಹಳೆ ನೋವುಗಳ ಒಂದೊಂದಾಗಿ ಕೊಲ್ಲುತ
ಜೀವನದ ಸಾರವನು ಸಿಹಿಯಾಗಿ ಚೆಲ್ಲುತ
ಮೂಡಣದಿ ನೇಸರನು ಮತ್ತೆ ಹುಟ್ಟಿ ಬಂದ..... ||

ಇರುಳಿನ ಸೆರಗಂತೆ ಕಷ್ಟಗಳು ಹೊದ್ದಿರಲು
ಬದುಕಿನಾಸೆಯು ಅವಕೆ ಕಿಚ್ಹ ಹಚ್ಚಿರಲು
ಹಗುರಾಯಿತು ಮನವು ಬಹುಕಾಲದ ಮೇಲೆ
ಕೊನೆಗೂ ತಿಳಿಯದಾದೆನು ಆ ದೇವನ ಲೀಲೆ.... ||

ಮನದಲ್ಲಿ ಪ್ರೀತಿಯ ಆಸೆ ಹುಟ್ಟಿಸಿದ
ಪ್ರೀತಿಯಿಂದಲೇ ಮನವ ಕಹಿಯಾಗಿ ತಿವಿದ
ಆ ಕಹಿಯು ಮನಸಿಂದ ಕಾಲ್ತೆಗೆಯುವ ಮೊದಲೇ
ಹೊಸ ಆಸೆ ಹೊಸ ಕನಸ ಹೆಗಲಲಿ ಹೊತ್ತು ತಂದ
ಮೂಡಣದಿ ನೇಸರನು ಮತ್ತೆ ಹುಟ್ಟಿ ಬಂದ .......|| 

1 comment: