About RAJ......

My photo
Sr. Software Engineer @ T8 International,Bangalore....

Wednesday, July 13, 2011

ಮರತೆನೆಂದರೂ ಮರೆಯಲಿ ಹ್ಯಾಂಗೆ

ನೆನಪಿನಂಗಳದ ಹೊತ್ತಗೆಯ ಪುಟಪುಟಗಳಲಿ ಅವಿತು
ಪದೇ ಪದೇ ಇಣುಕಿಣುಕಿ ನೋಡುವೆಯೇಕೆ, | ಗೆಳತಿ
ನಿನ್ನ ನೆನಪಲೆ ಸವೆವ ಈ ನನ್ನ ಜೀವವ ಮತ್ತೆ
ನಿನ್ನೊಲುಮೆಯ ನೆನಪಿಂದ ಇರಿಯುವಿಯೇಕೆ, | ಗೆಳತಿ

ಆ ನಗುಮೊಗವೆ ಕಣ್ಣೆದುರು ಸದಾ ನಿಂತಿರಲು
ನಿನ್ನ ಚಿತ್ರಪಟವೇಕೆ, | ಗೆಳತಿ
ಆ ಅಗಲಿಕೆಯು ನಂಬಲಸದಳವಾದರೂ
ಮೌನದಿ ನನ್ನಲೆ ನಿಂತಿರುವೆಯಾ ? | ಗೆಳತಿ

ಮಧುರ ದಿನಗಳ, ಸವಿ ಮಾತುಗಳ ಮತ್ತೆ ಮೆಲುಕುಣಿಸಿ
ನಿನ್ನ ಆ ಮುಗುಳ್ನಗೆಯ ನನ್ನ ಮನದಿ ಮೂಡಿಸಿ
ಸಿಗಲರದ ದೂರಕೆ ಏಕೆ ನೀ ತೆರಳಿದೆ, | ಗೆಳತಿ
ಮರತೆನೆಂದರೂ ಮರೆಯಲಿ ಹ್ಯಾಂಗೆ ನಿನ್ನ ನಾ,,,,,,,,,

                                           ಓ ನನ್ನ ಮುದ್ದು ಗೆಳತಿ...........................
                                                   

Tuesday, March 8, 2011

Happy WOMEN's Day.....




"Equal access to education, training and science and technology: Pathway to decent work for women".... Theme of 2011 Women's day.


“A woman is one of the most beautiful creation of GOD, showering her respect as daughter, feel her care in d form of a sister, feel her warmth in d form of a friend...”


Woman is the companion of man, gifted with equal mental capacity 
M K GANDHI

Wednesday, February 23, 2011

150 Rupee Coin...


RBI is going to launch 150 Rupee coin on the 150th Birth Anniversary of  RABINDRANATH TAGORE.

Roopa Venkatesh on Cancer Awarness....


Friday, February 4, 2011

ಬದುಕು ...

ಮೂಡಣದಿ ನೇಸರನು ಮತ್ತೆ ಹುಟ್ಟಿ ಬಂದ
ಹೊಸ ಆಸೆ ಹೊಸ ಕನಸ ಹೆಗಲಲಿ ಹೊತ್ತು ತಂದ...
ಬದುಕಿ ಹಳೆ ನೋವುಗಳ ಒಂದೊಂದಾಗಿ ಕೊಲ್ಲುತ
ಜೀವನದ ಸಾರವನು ಸಿಹಿಯಾಗಿ ಚೆಲ್ಲುತ
ಮೂಡಣದಿ ನೇಸರನು ಮತ್ತೆ ಹುಟ್ಟಿ ಬಂದ..... ||

ಇರುಳಿನ ಸೆರಗಂತೆ ಕಷ್ಟಗಳು ಹೊದ್ದಿರಲು
ಬದುಕಿನಾಸೆಯು ಅವಕೆ ಕಿಚ್ಹ ಹಚ್ಚಿರಲು
ಹಗುರಾಯಿತು ಮನವು ಬಹುಕಾಲದ ಮೇಲೆ
ಕೊನೆಗೂ ತಿಳಿಯದಾದೆನು ಆ ದೇವನ ಲೀಲೆ.... ||

ಮನದಲ್ಲಿ ಪ್ರೀತಿಯ ಆಸೆ ಹುಟ್ಟಿಸಿದ
ಪ್ರೀತಿಯಿಂದಲೇ ಮನವ ಕಹಿಯಾಗಿ ತಿವಿದ
ಆ ಕಹಿಯು ಮನಸಿಂದ ಕಾಲ್ತೆಗೆಯುವ ಮೊದಲೇ
ಹೊಸ ಆಸೆ ಹೊಸ ಕನಸ ಹೆಗಲಲಿ ಹೊತ್ತು ತಂದ
ಮೂಡಣದಿ ನೇಸರನು ಮತ್ತೆ ಹುಟ್ಟಿ ಬಂದ .......|| 

Wednesday, February 2, 2011

ಗೆಳತಿ .....

ನಿನ್ನ ಕಣ್ಣ ಕನ್ನಡಿಯಲಿ ಕಂಡೆ ಪ್ರೀತಿಯ ಅಲೆಗಳ ಸಾಗರ ...
ತುಟಿಯ ಅಂಚಲಿ ಮಿಂಚುತಲಿತ್ತು ಸಿಹಿ ಜೇನಿನ ಆಗರ ||

ಹುಡುಗಿ ನಿನ್ನಯ ಪ್ರಥಮ ನೋಟಕೆ ಸೋತು ಸುಣ್ಣವಾಗಿ ಹೋದೆನು ...
ನಿನ್ನ ದನಿಯ  ಸುಸ್ವರಗಳಿಗೆ ನಾ ಮೂಕವಿಸ್ಮಿತನಾದೆನು||

ಚಿಗರೆ ಕಂಗಳ ಚೆಲುವಿನೊಡತಿಯೆ ಮನದ ತುಂಬಾ ನೀನಿಹೆ ...
ಉಸಿರ ಕಂಪನ ಕೂಡ ನಿನ್ನಯ ಹೆಸರನೆ ಕೂಗಿ ಕರೆದಿದೆ  ||



Monday, January 31, 2011

ಗೆಳತಿ .....

ಗೆಳತಿ ನಿನ್ನ ಕಂಡ ಒಡನೆ ಏನೋ ಹೊಸ ಆಸೆಯು,
ಮುದುಡಿ ಹೋದ ಮನದ ಹೂವು ಮತ್ತೆ ಅರಳಿಕೊಂಡಿತು....

                          ಚೈತ್ರದಲ್ಲಿ ಹೂವ ಬಿಟ್ಟು ಚಿಗುರಿದಂತೆ ಮಾಮರ
                          ಒಲವ ಸೆಲೆಯು  ಚಿಲುಮೆಯೊಡೆದು ಮನದ ದಣಿವ ತಣಿಸಿತು...

ಎದೆಯ ಒಳಗೆ ಕಾಣದಂಥ ಪ್ರೇಮವೊಂದು ಉದಿಸಿತು
ಧಮನಿ ಧಮನಿಯಲ್ಲೂ ನಿನ್ನ ಹೆಸರನೆ ಅದು ಕೂಗಿತು....

                          ಹುಡುಗಿ ನಿನ್ನ ಕಾಣದೆಯೇ ಬಡವಾಯಿತು ಬದುಕು
                          ಬಾ ಬಂದು ಅಪ್ಪಿಕೋ ಗರಿಗೆದರಿಸು ಹೊಸ ಥಳುಕು........