About RAJ......

My photo
Sr. Software Engineer @ T8 International,Bangalore....

Wednesday, July 13, 2011

ಮರತೆನೆಂದರೂ ಮರೆಯಲಿ ಹ್ಯಾಂಗೆ

ನೆನಪಿನಂಗಳದ ಹೊತ್ತಗೆಯ ಪುಟಪುಟಗಳಲಿ ಅವಿತು
ಪದೇ ಪದೇ ಇಣುಕಿಣುಕಿ ನೋಡುವೆಯೇಕೆ, | ಗೆಳತಿ
ನಿನ್ನ ನೆನಪಲೆ ಸವೆವ ಈ ನನ್ನ ಜೀವವ ಮತ್ತೆ
ನಿನ್ನೊಲುಮೆಯ ನೆನಪಿಂದ ಇರಿಯುವಿಯೇಕೆ, | ಗೆಳತಿ

ಆ ನಗುಮೊಗವೆ ಕಣ್ಣೆದುರು ಸದಾ ನಿಂತಿರಲು
ನಿನ್ನ ಚಿತ್ರಪಟವೇಕೆ, | ಗೆಳತಿ
ಆ ಅಗಲಿಕೆಯು ನಂಬಲಸದಳವಾದರೂ
ಮೌನದಿ ನನ್ನಲೆ ನಿಂತಿರುವೆಯಾ ? | ಗೆಳತಿ

ಮಧುರ ದಿನಗಳ, ಸವಿ ಮಾತುಗಳ ಮತ್ತೆ ಮೆಲುಕುಣಿಸಿ
ನಿನ್ನ ಆ ಮುಗುಳ್ನಗೆಯ ನನ್ನ ಮನದಿ ಮೂಡಿಸಿ
ಸಿಗಲರದ ದೂರಕೆ ಏಕೆ ನೀ ತೆರಳಿದೆ, | ಗೆಳತಿ
ಮರತೆನೆಂದರೂ ಮರೆಯಲಿ ಹ್ಯಾಂಗೆ ನಿನ್ನ ನಾ,,,,,,,,,

                                           ಓ ನನ್ನ ಮುದ್ದು ಗೆಳತಿ...........................
                                                   

2 comments:

  1. ಅದ್ಭುತವಾಗಿದೆ ಗೆಳೆಯ, ನಿನ್ನ ಗೆಳತಿಯ ನೆನೆಯುವ ಪದಗಳು

    ReplyDelete